ಈ ಕತೆ ಬಹಳ ಧಿರ್ಘವಾದದ್ದಿ ಸಮಾಧಾನದಿಂದ ಓದಿದರೆ ಇಷ್ಟವಾಗುತ್ತದೆ
ಲತಾ 30 ವರ್ಷದ ವಿವಾಹಿತ ಮಹಿಳೆ ತಂದೆಯು ಆಗರ್ಭ ಶ್ರೀಮಂತ.
ಕಟ್ಟಿಕೊಂಡ ಗಂಡನು ಸಹ ಸಿರಿತನದಲ್ಲೆ ಹುಟ್ಟಿ ಬೆಳೆದ ಸಾಹುಕಾರ, ಲತಾ ಹುಟ್ಟಿನಿಂದಲೆ ಶ್ರೀಮಂತ ತಂದೆಯ ಸಿರಿವಂತಿಕೆಯಲ್ಲೆ ಬೆಳೆದವಳು ಕೈ ಕಾಲಿಗೂ ಆಳುಗಳು ಯಾವುದೇ ಕೆಲಸ ಮಾಡಿ ಅಭ್ಯಾಸ ಇಲ್ಲದವಳು ಎಲ್ಲವನ್ನೂ ಒಂದೇ ಚಿಟಿಕೆ ಶಬ್ದದಲ್ಲಿ ಮಾಡಿಸಿ ಅಭ್ಯಾಸ ಇಂತಹ ಮಗಳನ್ನು ಸಿರಿವಂತನಿಗೆ ಮದುವೆ ಮಾಡಿಸಬೇಕೆಂದು ನಿರ್ಧರಿಸಿ ತನಗಿಂತಲು ಸಿರಿವಂತ ವರನಿಗೆ ಮಗಳನ್ನು ಕೊಟ್ಟು ಮದುವೆ ಮಾಡಲಾಯಿತು ಲತಾಳಿಗೆ ಗಂಡನ ಮನೆಯು ಸಹ ತವರು ಮನೆಗಿಂತ ಭಿನ್ನವಾಗಿರಲಿಲ್ಲ, ತನ್ನ 20 ವಯಸ್ಸಿನಲ್ಲಿ ಮದುವೆ ಆದ ಲತಾಳಿಗೆ ಈಗ 8 ವರ್ಷದ ಮಗನಿದ್ದಾನೆ ಮದುವೆಯಾಗಿ 10 ವರ್ಷ ಕಳೆದಿದೆ ಬಹಳ ಸುಂದರವಾದ ಬದುಕು ಎಲ್ಲಾ ಕೆಲಸವನ್ನು ಮಾಡಲು ಆಳುಗಳ ದಂಡೆ ಇದೆ, ಅವಳ ಮುಂದೆ ಎಲ್ಲಾ ಕೈ ಕಟ್ಟಿ ನಿಲ್ಲುವವರೆ ಮನೆಯಾಗಲಿ ಲೇಡಿಸ ಕ್ಲಬ್ ಆಗಲಿ ಅವಳಿಗೆ ಎದುರು ನಿಂತು ಮಾತಾಡುವ ಧೈರ್ಯ ಯಾರು ಮಾಡಿಲ್ಲ ಕಟ್ಟಿಕೊಂಡ ಗಂಡನು ಸಹ, ಹೀಗೆ ಲತಾಳ ಜೀವನ ಎಲ್ಲಾ ತರದಲ್ಲು ಸರಿಯಾಗಿಯೆ ನಡೆಯುತ್ತಿತ್ತು, ಒಮ್ಮೆ ಗಾರ್ಡನ್ ಕೆಲಸ ಮಾಡುತ್ತಿದ್ದ ತಮ್ಮಣ್ಣ ಅವರ ಗಾರ್ಡನ್ ನಲ್ಲಿಯೆ ಹಾವು ಕಚ್ಚಿ ಸಾವೀಗೀಡಾಗುತ್ತಾನೆ ತಮ್ಮಣ್ಣನಿಗೆ ಹೆಂಡತಿ ಹಾಗೂ ಒಬ್ಬ ಮಗ ಹಾಗೂ ಮಗಳಿರುತ್ತಾರೆ ಮಗನಿಗೆ 20ವರ್ಷ. ಬಡತನದಿಂದ ಮಕ್ಕಳನ್ನು ಓದಿಸಲು ಆಗಿರುವುದಿಲ್ಲ ಈಗ ತಮ್ಮಣ್ಣನ ಸಾವಿನಿಂದ ಅವನ ಕುಟುಂಬಕ್ಕೆ ಆಗಿರುವ ನಷ್ಟ ತುಂಬಲು ಲತಾಳ ಗಂಡ ದಿನಕರ್ ತಮ್ಮಣ್ಣನ ಮಗನಾದ ರವಿಗೆ ತಮ್ಮ ಮನೆಯಲ್ಲಿ ಕೆಲಸ ನೀಡಿ ಪರಿಹಾರವೆಂದು 5 ಲಕ್ಷ ಹಣವನ್ನು ನೀಡಿರುತ್ತಾರೆ ಮೊದಲಿಂದಲು ಹಟಮಾರಿಯಾದ ರವಿ ಶ್ರೀಮಂತರ ಮನೆಯ ಕೆಲಸ ಮಾಡಲು ಒಪ್ಪುತ್ತಿರಲಿಲ್ಲ ಹೀಗಾಗಿ ತಂದೆ ಎಷ್ಟು ಬಾರಿ ಕರೆದರು ಕೇಳಿರಲಿಲ್ಲ ಆದರೀಗ ತಾಯಿಯ ಮಾತಿಗೆ ಕಟ್ಟುಬಿದ್ದು ಲತಾ ದಿನಕರ್ ಮನೆಗೆ ಕೆಲಸಕ್ಕೆ ಸೇರುತ್ತಾನೆ.
ರವಿ ಬಹಳ ಮುಂಗೋಪಿ ನೋಡಲು ಕಪ್ಪಗಿದ್ದು ಸಾದರಣ ಎತ್ತರ ಹಾಗೂ ಸಣಕಲು ಮೈಕಟ್ಟು, ಕೆಲಸಕ್ಕೆ ಸೇರಿದ ನಂತರ ಶ್ರದ್ಧೆಯಿಂದ ಗಾರ್ಡನ್ ಕೆಲಸ ಮಾಡಿಕೊಂಡಿರತ್ತಾನೆ, ಒಮ್ಮೆ ಲತಾ ಗಾರ್ಡನ್ ನಲ್ಲಿ ವಾಕ್ ಮಾಡುತ್ತಿರುವಾಗ ಎಲ್ಲಾ ಆಳುಗಳು ಅವಳಿಗೆ ತಲೆಬಾಗಿ ನಮಸ್ಕರಿಸುತ್ತಾರೆ ಆದರೆ ಗಿಡಗಳಿಗೆ ನೀರು ಹಾಕತ್ತಿದ್ದ ರವಿ ಮನೆಯೊಡತಿಗೆ ಕ್ಯಾರೆ ಎನುವುದಿಲ್ಲ. ಇದನ್ನು ಕಂಡು ಸಿಟ್ಟಿಗೆದ್ದ ಲತಾ ಅವನನ್ನು ಕರೆದು ಬಯ್ಯುತ್ತಾಳೆ ನಮಸ್ಕರಿಸು ಎಂದು ಆದೇಶಿಸುತ್ತಾಳೆ ಆದರೆ ಮುಂಗೋಪಿ ರವಿ ನನಗೆ ಕೆಲಸ ಇರುವುದು ಗಾರ್ಡನ್ ನೋಡಿಕೊಳ್ಳಲು ನಿನಗೆ ಸೆಲ್ಯೂಟ್ ಹೊಡೆಯಲು ಅಲ್ಲ ಎಂದು ಖಡಕ್‌ಆಗಿ ಉತ್ತರಿಸುತ್ತಾನೆ, ಇದುವರೆಗೂ ಬರಿ ಗೌರವ ಭಕ್ತಿ ಕಂಡ ಲತಾಳಿಗೆ ಇದರಿಂದ ಬಹಳ ಇರಿಸು ಮುರಿಸಾಗುತ್ತದೆ ಕೋಪಗೊಂಡು ಒಡನೆ ಕೆಲಸ ಬಿಟ್ಟು ಹೋಗಲು ಹೇಳುತ್ತಾಳೆ ಆದರು ರವಿ ಅವಳ ಮಾತು ದಿಕ್ಕರಿಸಿ ನನಗೆ ಕೆಲಸ ನೀಡಿದ್ದು ದಿನಕರ್ ಸಾಹೆಬರು ನೀನಲ್ಲ ಎಂದು ತನಗೆ ನೀಡಿದ ಸಣ್ಣ ಔಟ್ ಹೌಸ್ ಹೋಗುತ್ತಾನೆ, ಕುಪಿತಳಾದ ಲತಾ ಒಡನೆ ಗಂಡನಿಗೆ ಕರೆ ಮಾಡಿ ಕರೆಸಿಕೊಂಡು ನಡೆದಿದ್ದೆಲ್ಲಾ ಒಪ್ಪಿಸುತ್ತಾಳೆ ಕೂಡಲೆ ರವಿಯನ್ನು ಕೆಲಸದಿಂದ ತೆಗೆಯಲು ಹೇಳುತ್ತಾಳೆ ಆದರೆ ದಿನಕರ್ ಹೀಗೆ ಮಾಡಲು ಸಾಧ್ಯವಿಲ್ಲ ನಮ್ಮ ಅಜಾಕರುತೆಯಿಂದ ಅವನ ತಂದೆ ಸತ್ತಿದ್ದಾರೆ ಈಗ ಅವನನ್ನು ಕೆಲಸದಿಂದ ತೆಗೆದರೆ ಮುಂದೆ ಸಮಸ್ಯೆ ಆಗಬಹುದು ನಾನು ಅವನಿಗೆ ಬುದ್ದಿ ಹೇಳುವೆ ಇದೊಂದುಬಾರಿ ಕ್ಷಮಿಸಿಬಿಡು ಎಂದು ಸುಮ್ಮನಾಗಿಬಿಡುತ್ತಾರೆ.
ಇದರಿಂದ ಲತಾಳಿಗೆ ಜೀವನದಲ್ಲಿ ಮೊದಲಬಾರಿ ಅವಮಾನವಾದ ಅನುಭವ ತನ್ನಂತ ಸುಂದರಿ ಹುಟ್ಟು ಶ್ರೀಮಂತೆ ಒಬ್ಬ ಬಡಕಲು ದೇಹದ ಆಳಿನ ಎದುರು ಸೋತಂತಾಯಿತಲ್ಲ ಎಂದು ತನ್ನೊಳಗೆ ತಾನೆ ಕುದಿದು ಆ ಗುಂಗಿನಲ್ಲೆ ನಿದ್ರೆಗೆ ಜಾರುತ್ತಾಳೆ, ಆ ಗುಂಗು ಕನಸಲ್ಲು ಸಹ ಬಿಡಲಿಲ್ಲ